ನೇಹಾ ಹಿರೇಮಠ ಹತ್ಯಯನ್ನು ಖಂಡಿಸಿ ಕಿತ್ತೂರು ಭಾಜಪಾ ಹಾಗೂ ವಿವಿಧ ಹಿಂದು ಪರ ಸಂಘಟನೆಗಳ ವತಿಯಿಂದ ಗುರುವಾರ ಪ್ರತಿಭಟನೆ ಜರುಗಿತು

 


ಕಿತ್ತೂರು ವಿಜಯ

ಚನ್ನಮ್ಮನ ಕಿತ್ತೂರು: ಏಪ್ರೀಲ 18 ರಂದು  ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯಯನ್ನು ಖಂಡಿಸಿ ಕಿತ್ತೂರು ಭಾರತೀಯ ಜನತಾ ಪಕ್ಷ ಹಾಗೂ ವಿವಿಧ ಹಿಂದು ಪರ ಸಂಘಟನೆಗಳ ವತಿಯಿಂದ ಗುರುವಾರ ರಾಷ್ಟ್ರೀಯ ಹೆದ್ದಾರಿ ಹತ್ತಿರಿ ಇರುವ ರಾಣಿ ಚನ್ನಮ್ಮಾಜಿ ಅವರ ಸರ್ಕಲ್ಲಿನಿಂದ ತಾಲೂಕಾ ಆಡಳಿತ ಕಚೇರಿ ವರಿಗೆ ಪಾದಯಾತ್ರೆ ಮೂಲಕ ತೆರಳಿ ತಾಲೂಕಾ ದಂಡಧಿಕಾರಿ ರವೀಂದ್ರ ಹಾದಿಮನಿ ಅವರ ಮೂಲಕ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌ ಅವರಿಗೆ ಕುಮಾರಿ ನೇಹಾ ಹಿರೇಮಠ ಅವರ ಹತ್ಯೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಹಾಗೂ ಕ್ರೂರವಾಗಿ ಹತ್ಯೆ ಮಾಡಿದ  ಆರೋಪಿ ಫಯಾಜನನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಅಥವಾ ಎನ್ಕೌಂಟರ್‌ ಮಾಡಬೇಕು ಎಂದು ನಾವೆಲ್ಲರೂ ಒಕ್ಕೊರಲಿನಿಂದ ವಿನಂತಿಸಿಕೊಳ್ಳುತ್ತೇವೆ ಎಂದು ಬರೆದ ಮನವಿ ಪತ್ರವನ್ನು ನೀಡಿದರು.



ಪ್ರತಿಭಟನೆ ಮುಂಚೆ ರಾಣಿ ಚನ್ನಮ್ಮ ಸರ್ಕಲ್ಲನಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ನೇಹಾ ಹಿರೇಮಠ ಹತ್ಯಯ ಕೇಸನ್ನು ರಾಜ್ಯ ಸರ್ಕಾರ ಸಿಐಡಿಗೆ ಕೊಟ್ಟಿದ್ದು ಅದರ ಮೇಲೆ ಜನರ ವಿಶ್ವಾಸ ಹೊರಟು ಹೋಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರ ಮುಖ್ಯಮಂತ್ರಿಯಾಗಿದ್ದರೆ ಮೊದಲು ಈ ಕೇಸನ್ನು ಸಿಬಿಐಗೆ ನೀಡಬೇಕು. ಒಂದು ವೇಳೆ ಉತ್ತರ ಪ್ರದೇಶದ ಯೋಗಿ ಸರ್ಕಾರದಲ್ಲಿ ಇಂತಹ ಘಟನೆ ಸಂಭವಿಸಿದ್ದರೆ ಅದೇ ದಿನ ಸಂಜೆ ಆತನ ಎನ್ಕೌಂಟರ್‌ ಆಗುವುದರ ಜೊತೆ ಬೋಲ್ಡೋಜರ್‌ ಮೂಲಕ ಮಂತಾಂಧನ ಮನೆ ದ್ವಂಸ ಆಗುತ್ತಿತ್ತು. ಇಂತಹ ಘಟನೆಗಳು ಪದೆ ಪದೆ ನಡೆಯಬಾರದು ಎಂದರೆ ಇಂತಹ ಕೊಲೆಗಳನ್ನು ಮಾಡುವ ಕ್ರೂರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಅಂದಾಗ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಹೇಳಿದ ಅವರು ನಾವು ನೇಹಾ ಹಿರೇಮಠ ಅವರ ಕುಟುಂಭದ ಜೊತೆ ಯಾವತ್ತು ಇರುತ್ತೇವೆ ಎಂದು ಹೇಳಿದರು.

ಬಿಜೆಪಿ ಮುಖಂಡೆ ಸರಸ್ವತಿ ಹೈಬತ್ತಿ ಮಾತನಾಡಿ ರಾಜ್ಯ ಸರ್ಕಾರಕ್ಕೆ ನೇಹಾ ಹಿರೇಮಠ ಹತ್ತಯೆ ಮಾಡಿದ ಮತಾಂಧ ಫಯಾಜನ್ನು ಎನ್ಕೌಂಟರ್‌ ಮಾಡಲು ಆಗದಿದ್ದರೆ ಆತನನ್ನು ನಮ್ಮ ಕೈಗೆ ಕೊಡಿ ಆತನನ್ನು ನಮ್ಮ ಹಿಂದು ಯುವಕರು ನಾಯಿ ಹೆರಿದು ತಿಂದಂತೆ ಅವನನ್ನು ತಿಂದು ಬಿಡುತ್ತಾರೆ ಎಂದರು.

ಈ ವೇಳೆ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಬೆಳಗಾವಿ ಗ್ರಾಮಾಂತರ ಜಿಲ್ಲಾ ಸಹ ವಕ್ತಾರ ಬಸವರಾಜ ಮಾತನವರ, ಮಂಜುನಾಥ ದಿಬ್ಬದ, ಈರಣ್ಣ ಬಡಿಗೇರ, ಜಿತೇಂದ್ರ ಜೈನ, ಮಹೇಶ ಅಂಬಡಗಟ್ಟಿ, ವಿಶ್ವಹಿಂದು ಪರಿಷತ್ತ ಮುಖಂಡ ಸಾಗರ ಕಾಮಕರ, ಶಿವು ಹಿರೇಮಠ, ಆನಂದ ನರೇಂದ್ರಮಠ ಸೇರಿದಂತೆ ಭಾಜಪಾ ಕಾರ್ಯಕರ್ತರು ಮತ್ತು ಕಿತ್ತೂರು ನಾಡಿನ ವಿವಿಧ ಹಿಂದು ಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಇದ್ದರು.

Post a Comment

Previous Post Next Post
ಸುದ್ದಿ ಮತ್ತು ಜಾಹಿರಾತುಗಾಗಿ‌ ಸಂಪರ್ಕಿಸಿ : (ಮಾಹಾಂತೇಶ್ ಕರಬಸನ್ನವರ) : 9844101425